ಬಂಧಿತ ಬದುಕಿಗೆ ಖಿನ್ನತೆಯೆ ಫಲವು
ಸರಳಿ ಬವಣೆಗೆ ದುರಾಸೆಯೆ ಮೂಲವು
ಸರಳ ಜೀವನಕೆ ನೆಮ್ಮದಿಯೆ ದೇಗುಲವು
ರಾಮಚಂದ್ರ ಸಾಗರ್
ಅಂಧಕಾರದ ಮನಸ್ಸಿಗಿದೆ ಅಜ್ಞಾನವೆನ್ನುವ ನೆರಳು
ಅಂತರಂಗದ ತುಮುಲಗಳಿಗಿದೆ
ನೋವೆನ್ನುವ ನೆರಳು
ಅಂಜುಬುರುಕ ಹಾದಿಗಿದೆ
ಹೇಡಿತನದ ನೆರಳು
ಅಂತಃಕರಣದ ಪರಾಮರ್ಶೆಯಲ್ಲಿದೆ ಸತ್ಯದ ನೆರಳು
ರಾಮಚಂದ್ರ ಸಾಗರ್
ಸದ್ಭಾವದ ಮನದಲಿ ಸುಗುಣದ ದೀಪವಾಗು
ಸದ್ಭಾಷಿಣಿ ಕಿರಣಗಳಲಿ ಮನ-ಮನಗಳ ಬೆಳಗು
ಸಹನೆಯ ಸ್ಮರಣೆಯಲಿ ದಿವ್ಯತೆಯ ಕರುಣಿಸು
ಸಹಮತದ ಬದುಕಿನಲಿ ಭವ್ಯತೆಯ ಹರಸು
ರಾಮಚಂದ್ರ ಸಾಗರ್