ಎಲ್ಲಾ ಸಹೋದರ ಬಂಧುಗಳಿಗೂ ದೀಪಾವಳಿಯ ಶುಭಾಶಯಗಳು.
"ಬೆಳಕಿನ ಹಬ್ಬ ಎಲ್ಲರ ಬದುಕನ್ನು ಬೆಳಗಲಿ, ಅಂಧಕಾರ ಕರಗಿ ಹರುಷದ ದೀಪದ ಬೆಳಕಲ್ಲಿ ಸಂತಸ ಮೂಡಲಿ, ಎಲ್ಲರ ಬದುಕಲ್ಲಿ ಕನುಸಗಳು ನನಸಾಗಿ ಒಲುಮೆಯ ಜಗವಾಗಲಿ" ಎನ್ನುವ ಆಶಯದೊಂದಿಗೆ ನಾ ಬರೆದ "ದೀಪಾವಳಿ" ಕವಿತೆಯನ್ನು ಪೋಸ್ಟ್ ಮಾಡುತ್ತಿದ್ದೇನೆ. ಎಲ್ಲರಿಗೂ ಮತ್ತೊಮ್ಮೆ ಬೆಳಕಿನ ಹಬ್ಬದ ಶುಭಾಶಯಗಳು.
ದೀಪಾವಳಿ...
ದಿಗಂತದ ತುದಿಯಲಿ
ಚಿಮ್ಮಿದಾ ಬೆಳಕಲಿ
ನವ್ಯತೆಯ ಭಾವದಲಿ
ಭವ್ಯತೆಯ ದೀಪಾವಳಿ....
ಎಲ್ಲರೆದೆಯ ಬೆಸುಗೆಯಲ್ಲಿ
ಸಹೋದರತ್ವ ಬಂಧದಲ್ಲಿ
ದೀನತೆಯ ಅಂತ್ಯದಲ್ಲಿ
ಹರುಷದಾ ದೀಪಾವಳಿ...
ಶ್ರಮದಾನದ ಕಾಯದಲ್ಲಿ
ಶ್ರಮದ ಹನಿಗಳ ನಗುವಿನಲ್ಲಿ
ನೊಂದ ದನಿಯ ಗೆಲುವಿನಲ್ಲಿ
ಚೈತನ್ಯದ ದೀಪಾವಳಿ..
ಬಡತನದ ಅಳಿವಿನಲ್ಲಿ
ಅಸಹಾಯಕರ ನಗುವಿನಲ್ಲಿ
ನಿಸ್ವರ್ಥ ಮನಗಳ ಅಕ್ಷಯದಲಿ
ಅಕ್ಷಯ ದೀಪಾವಳಿ...
ಜ್ಞಾನ ದೀವಟಿಗೆ ಬೆಳಗಿನಲ್ಲಿ
ಅಜ್ಞಾನ ಅಂಧಕಾರಗಳ ದಹನದಲ್ಲಿ
ಹೊಸ ಗುರಿಗಳ ಕನಸಿನಲ್ಲಿ
ಜ್ಞಾನದ ದೀಪಾವಳಿ...
ರಾಮಚಂದ್ರ ಸಾಗರ್