Saturday, 6 January 2018

ಕಾದಿರುವೆ ನಿನಗಾಗಿ...

ಹುಡುಗಿ ನೀ ನಡೆವ ಹಸಿರು ಬನದ ಹಾದಿಯಲಿ
ಮತ್ತದೇ ಕಾತರಿಸುವ ಕನಸುಗಳ ಜೊತೆಯಲಿ
ಕಾದಿರುವೆ ನಿನಗಾಗಿ ನೀ ತರುವ ನಗುವಿಗಾಗಿ
ಬೇಡುತಿರುವೆ ನಿನಗಾಗಿ ನಿನ್ನೊಲವ ಮಡಿಲಿಗಾಗಿ

ಹುಡುಗಿ ನೀ ಕೈಬೀಸಿ ತೋರಿದ ಕಡಲ ಕಿನಾರೆಯಲಿ
ಮತ್ತದೇ ಕಾಡುವ ಸಿಹಿ ಕನಸುಗಳ ನೆನಪಲಿ
ಮುಸ್ಸಂಜೆಯ ರಂಗು ಕಳೆಯೇರಿದ ಘಳಿಗೆಯಲಿ
ಕಾದಿರುವೆ ನಿನಗಾಗಿ ನೀ ತರುವ ನಗುವಿಗಾಗಿ

ಹುಡುಗಿ ನೀ ನವಿರಾಗಿ ಗುನುಗಿದ ಸವಿಗಾನದ ಸಿಹಿಯಲಿ
ಒಲವಗಾನದ ಸವಿ ಕಂಪಲಿ ಒಲವರಾಗದ ಸೌರಭದಲೆಯಲಿ
ಮತ್ತದೇ ಕಾಡುವ ಸಿಹಿ ದನಿಗಾಗಿ ಸವಿ ಇಂಪಿಗಾಗಿ
ಕಾದಿರುವೆ ನಿನಗಾಗಿ ಒಲವಗಾನದ ಇಂಪಿಗಾಗಿ

ಹುಡುಗಿ ನೀ  ನಲಿವಾಗ ಅರಳುವ ಸೌಂದರ್ಯದ ಜಗದ ಮೋಡಿಗಾಗಿ
ಸೊಬಗು ಸೂಸುವ ನಿನ್ನ ಬಿನ್ನಾಣದ ನಗುವಿಗಾಗಿ
ಮತ್ತದೇ ಬೆಳುದಿಂಗಳು ರಾತ್ರಿಯಲಿ
ಕಾದಿರುವೆ ನಿನಗಾಗಿ ನೀ ನಲಿವ ಸಿರಿ ಘಳಿಗೆಗಾಗಿ...

ರಾಮಚಂದ್ರ ಸಾಗರ್