ಮಧುರ ಪ್ರೇಮದ ಕುಸುಮದ ಕಂಪು
ಒಲವ ಸೌಧದಲಿ ಸದಾ ಇರಿಸು ಬಾ ಗೆಳತಿ
ಮಮತೆಯ ಕಡಲಲೆಯ ಸದ್ದು
ಒಲವ ಸೌಧದಲಿ ಸದಾ ಇಡಲು ಬಾ ಗೆಳತಿ
ನಿನ್ನೊಲುಮೆಯ ಇರಾದೆಯ ಛಲವು
ಬಾಳ ನೌಕೆಯಲಿ ಸದಾ ನೆಲೆಯಾಗಿಸಲು ಬಾ ಗೆಳತಿ
ಅನುರಾಗದ ಅತಿಶಯದ ಮಡಿಲು
ನಿನ್ನಾಸರೆಯ ಸಿರಿಯಲ್ಲಿ ಬಾಳಿಗೊಲಿಸಲು ಬಾ ಗೆಳತಿ
ಇಂಗಳದ ಅಂಗಳದಲ್ಲು ತಂಬೆಳಕನು
ಮೊಗೆದು ಚೆಲ್ಲುವ ಜೀವವು ನೀನಾಗಿ ಬಾ ಗೆಳತಿ
ಇಳಿಮೊಗದ ನೋವಿನಲ್ಲು ಮಾಧುರ್ಯವನು
ನಗುತ ತುಂಬುವ ನಗುಧಾರೆಯು ನೀನಾಗಿ ಬಾ ಗೆಳತಿ
ಬಡತನದ ನೋವಿಗೆ ಸಂತೈಸುವ ಹಿತಧಾರೆಯು
ಹಂಗಿಸುವ ಜಗಕೆ ಉತ್ತರಿಸುವ ಅತಿಶಯವು
ಕಹಿಯಲೆಯ ಮೊರೆತವ ಸದ್ದಡಗಿಸುವ ಮದ್ದು
ನಿತ್ಯ ಬಾಳು ಬೆಳಗುವವಳು ನೀನಾಗಿ ಬಾ ಗೆಳತೀ..
ಜಗದಗಲ ನಿನ್ನ ಅನುರಾಗದ ಮೇಳದಲ್ಲಿ
ಸಿಹಿ ಕನಸುಗಳ ಜಾತ್ರೆಯಲಿ ನಡೆಸುವಳು ನೀನಾಗಿ ಬಾ ಗೆಳತೀ
ಅನನ್ಯ ಅನುಪಮ ಅನುರಕ್ತಿಯ ಛಲದಲ್ಲಿ
ಪ್ರೇಮದ ಹಂದರದಲಿ ನಿತ್ಯ ನಗು ಸೂಸುವಳು ನೀನಾಗಿ ಬಾ ಗೆಳತೀ..
ರಾಮಚಂದ್ರ ಸಾಗರ್
ಒಲವ ಸೌಧದಲಿ ಸದಾ ಇರಿಸು ಬಾ ಗೆಳತಿ
ಮಮತೆಯ ಕಡಲಲೆಯ ಸದ್ದು
ಒಲವ ಸೌಧದಲಿ ಸದಾ ಇಡಲು ಬಾ ಗೆಳತಿ
ನಿನ್ನೊಲುಮೆಯ ಇರಾದೆಯ ಛಲವು
ಬಾಳ ನೌಕೆಯಲಿ ಸದಾ ನೆಲೆಯಾಗಿಸಲು ಬಾ ಗೆಳತಿ
ಅನುರಾಗದ ಅತಿಶಯದ ಮಡಿಲು
ನಿನ್ನಾಸರೆಯ ಸಿರಿಯಲ್ಲಿ ಬಾಳಿಗೊಲಿಸಲು ಬಾ ಗೆಳತಿ
ಇಂಗಳದ ಅಂಗಳದಲ್ಲು ತಂಬೆಳಕನು
ಮೊಗೆದು ಚೆಲ್ಲುವ ಜೀವವು ನೀನಾಗಿ ಬಾ ಗೆಳತಿ
ಇಳಿಮೊಗದ ನೋವಿನಲ್ಲು ಮಾಧುರ್ಯವನು
ನಗುತ ತುಂಬುವ ನಗುಧಾರೆಯು ನೀನಾಗಿ ಬಾ ಗೆಳತಿ
ಬಡತನದ ನೋವಿಗೆ ಸಂತೈಸುವ ಹಿತಧಾರೆಯು
ಹಂಗಿಸುವ ಜಗಕೆ ಉತ್ತರಿಸುವ ಅತಿಶಯವು
ಕಹಿಯಲೆಯ ಮೊರೆತವ ಸದ್ದಡಗಿಸುವ ಮದ್ದು
ನಿತ್ಯ ಬಾಳು ಬೆಳಗುವವಳು ನೀನಾಗಿ ಬಾ ಗೆಳತೀ..
ಜಗದಗಲ ನಿನ್ನ ಅನುರಾಗದ ಮೇಳದಲ್ಲಿ
ಸಿಹಿ ಕನಸುಗಳ ಜಾತ್ರೆಯಲಿ ನಡೆಸುವಳು ನೀನಾಗಿ ಬಾ ಗೆಳತೀ
ಅನನ್ಯ ಅನುಪಮ ಅನುರಕ್ತಿಯ ಛಲದಲ್ಲಿ
ಪ್ರೇಮದ ಹಂದರದಲಿ ನಿತ್ಯ ನಗು ಸೂಸುವಳು ನೀನಾಗಿ ಬಾ ಗೆಳತೀ..
ರಾಮಚಂದ್ರ ಸಾಗರ್
