ಮೆಲುನಗುವ ನಿನ್ನ ಮೋಹದಲಿ
ಬಂಧಿಯಾಗಿದೆ ನನ್ನ ಮನಸು
ಮೆಲುನಗುವ ನಿನ್ನ ಸೊಬಗಿನಲ್ಲಿ
ಮೈಮರೆತಿದೆ ನನ್ನ ಮನಸು
ಹೂನಗುವ ನಿನ್ನ ರಂಗಿನಲ್ಲಿ
ಬದುಕಲಿ ಬಣ್ಣ ತುಂಬಿದೆ ಕನಸು
ಪಳಿಸುವ ನಿನ್ನ ನಯನದಲ್ಲಿ
ಬದುಕಲಿ ಬೆಳಗುತಿದೆ ಒಲವದೀಪ
ಕುಣಿವ ನಿನ್ನ ಮುಂಗುರುಳಿನಲ್ಲಿ
ಆಹ್ವಾನವಿದೆ ನನ್ನ ಮನಕೆ
ಕುಡಿ ನೋಟದ ನಿನ್ನ ಒಲುಮೆಯಲ್ಲಿ
ಅನುರಾಗದ ಬಲವಿದೆ ಮನಕೆ
ಅಕ್ಕರೆಯ ನಿನ್ನ ನಗುವಿನಲ್ಲಿ
ಮನಕೆ ಲವಲವಿಕೆಯ ಲಯವಿದೆ
ಸಕ್ಕರೆಯ ನಿನ್ನ ಮನದಲ್ಲಿ
ನನ್ನ ಹೆಸರಿಗೆ ಜಾಗವಿದೆ
ಪ್ರೀತಿಯ ನಿನ್ನ ಸಾನಿಧ್ಯದಲಿ
ಮೌನಿಯಾಗಿದೆ ಮನಸು
ನಿನ್ನೊಲವರಾಧನೆಯ ಜಪದಲಿ
ಸಿಹಿಯಾಗಿದೆ ಮನಸು..
ನಿನ್ನ ನಗುಮೊಗದ ದರ್ಶನಕೆ
ಅನುರಾಗದ ಅಕ್ಕರೆಗೆ
ಗೆಳತಿ ಕಾದಿರುವೆ ನಿನಗಾಗಿ..
ನೀ ನೀಡುವ ಹೂ ನಗುವಿಗಾಗಿ..
ರಾಮಚಂದ್ರ ಸಾಗರ್
ಬಂಧಿಯಾಗಿದೆ ನನ್ನ ಮನಸು
ಮೆಲುನಗುವ ನಿನ್ನ ಸೊಬಗಿನಲ್ಲಿ
ಮೈಮರೆತಿದೆ ನನ್ನ ಮನಸು
ಹೂನಗುವ ನಿನ್ನ ರಂಗಿನಲ್ಲಿ
ಬದುಕಲಿ ಬಣ್ಣ ತುಂಬಿದೆ ಕನಸು
ಪಳಿಸುವ ನಿನ್ನ ನಯನದಲ್ಲಿ
ಬದುಕಲಿ ಬೆಳಗುತಿದೆ ಒಲವದೀಪ
ಕುಣಿವ ನಿನ್ನ ಮುಂಗುರುಳಿನಲ್ಲಿ
ಆಹ್ವಾನವಿದೆ ನನ್ನ ಮನಕೆ
ಕುಡಿ ನೋಟದ ನಿನ್ನ ಒಲುಮೆಯಲ್ಲಿ
ಅನುರಾಗದ ಬಲವಿದೆ ಮನಕೆ
ಅಕ್ಕರೆಯ ನಿನ್ನ ನಗುವಿನಲ್ಲಿ
ಮನಕೆ ಲವಲವಿಕೆಯ ಲಯವಿದೆ
ಸಕ್ಕರೆಯ ನಿನ್ನ ಮನದಲ್ಲಿ
ನನ್ನ ಹೆಸರಿಗೆ ಜಾಗವಿದೆ
ಪ್ರೀತಿಯ ನಿನ್ನ ಸಾನಿಧ್ಯದಲಿ
ಮೌನಿಯಾಗಿದೆ ಮನಸು
ನಿನ್ನೊಲವರಾಧನೆಯ ಜಪದಲಿ
ಸಿಹಿಯಾಗಿದೆ ಮನಸು..
ನಿನ್ನ ನಗುಮೊಗದ ದರ್ಶನಕೆ
ಅನುರಾಗದ ಅಕ್ಕರೆಗೆ
ಗೆಳತಿ ಕಾದಿರುವೆ ನಿನಗಾಗಿ..
ನೀ ನೀಡುವ ಹೂ ನಗುವಿಗಾಗಿ..
ರಾಮಚಂದ್ರ ಸಾಗರ್
