ಒಯ್ಯಾರಿ ನೀ ಜೊತೆಯಾಗಿ ನಗುತಿರಲು
ಮುಸ್ಸಂಜೆಯ ಸೊಬಗು ಸಂಭ್ರಮದ ಗೂಡಾದಂತೆ
ವಲ್ಲರಿ ನೀ ಹಿತವಾಗಿ ನಲಿಯುತಿರಲು
ಬೆಳುದಿಂಗಳ ಬಿಳುಪು ನಿನಗಾಗೇ ಸುರಿದಂತೆ..
ಕಾದಲೆ ನೀ ಕಳೆಯೇರಿ ನಾಚುತಿರಲು
ಶೃಂಗಾರದ ಹೊನಲು ಮೈದುಂಬಿ ಸಾಗಿದಂತೆ
ಕಾವ್ಯಲತೆ ನೀ ಬಳುಕಿ ಸಾಗುತಿರಲು
ರೇಗಿಸುವ ಕನಸುಗಳು ಬಿಡುವಿಲ್ಲದೆ ಸುಳಿದಂತೆ..
ನಲ್ಲೆ ನೀ ಒಲವಿನ ಕಾಣಿಕೆಯಾಗಿರಲು
ನಲುಮೆ ಬದುಕು ವರವಾಗಿ ಬಂದಂತೆ
ಚೆಲುವೆ ನೀ ನಸುನಗುವ ಹೂವಾಗಿರಲು
ಹೂಬನದ ಸೊಬಗು ನಿನ್ನಿಂದ ಮೂಡಿದಂತೆ..
ಗೆಳತಿ ನೀ ಅಕ್ಕರೆಯ ಮಡಿಲಾಗಿರಲು
ಒಲುಮೆಯ ಆಸರೆ ನಿನ್ನಿಂದ ಒಲಿದಂತೆ
ಒಡನೆ ನೀ ಹೃದಯತುಂಬಿ ಕೈ ಹಿಡಿದಿರಲು
ಬಾಳ ನಾವೆಯು ಸಂತಸದ ಶರಧಿಯಾದಂತೆ..
ಒನಪು ತುಂಬಿದ ನಿನ್ನ ನಗುವಲಿ
ಕಳೆಯೇರುವ ಕನಸುಗಳು ಬಿರುಮಳೆಯಾದಂತೆ
ಮಿಂಚುಬಳ್ಳಿಯಲ್ಲಿ ನೀ ಉದಿತ ಚೆಲುವೆಯಾದಂತೆ
ನಗುವ ನೈದಿಲೆಯಾಗಿ ಸಹಿತ ನಕ್ಕಂತೆ...
ರಾಮಚಂದ್ರ ಸಾಗರ್
ಮುಸ್ಸಂಜೆಯ ಸೊಬಗು ಸಂಭ್ರಮದ ಗೂಡಾದಂತೆ
ವಲ್ಲರಿ ನೀ ಹಿತವಾಗಿ ನಲಿಯುತಿರಲು
ಬೆಳುದಿಂಗಳ ಬಿಳುಪು ನಿನಗಾಗೇ ಸುರಿದಂತೆ..
ಕಾದಲೆ ನೀ ಕಳೆಯೇರಿ ನಾಚುತಿರಲು
ಶೃಂಗಾರದ ಹೊನಲು ಮೈದುಂಬಿ ಸಾಗಿದಂತೆ
ಕಾವ್ಯಲತೆ ನೀ ಬಳುಕಿ ಸಾಗುತಿರಲು
ರೇಗಿಸುವ ಕನಸುಗಳು ಬಿಡುವಿಲ್ಲದೆ ಸುಳಿದಂತೆ..
ನಲ್ಲೆ ನೀ ಒಲವಿನ ಕಾಣಿಕೆಯಾಗಿರಲು
ನಲುಮೆ ಬದುಕು ವರವಾಗಿ ಬಂದಂತೆ
ಚೆಲುವೆ ನೀ ನಸುನಗುವ ಹೂವಾಗಿರಲು
ಹೂಬನದ ಸೊಬಗು ನಿನ್ನಿಂದ ಮೂಡಿದಂತೆ..
ಗೆಳತಿ ನೀ ಅಕ್ಕರೆಯ ಮಡಿಲಾಗಿರಲು
ಒಲುಮೆಯ ಆಸರೆ ನಿನ್ನಿಂದ ಒಲಿದಂತೆ
ಒಡನೆ ನೀ ಹೃದಯತುಂಬಿ ಕೈ ಹಿಡಿದಿರಲು
ಬಾಳ ನಾವೆಯು ಸಂತಸದ ಶರಧಿಯಾದಂತೆ..
ಒನಪು ತುಂಬಿದ ನಿನ್ನ ನಗುವಲಿ
ಕಳೆಯೇರುವ ಕನಸುಗಳು ಬಿರುಮಳೆಯಾದಂತೆ
ಮಿಂಚುಬಳ್ಳಿಯಲ್ಲಿ ನೀ ಉದಿತ ಚೆಲುವೆಯಾದಂತೆ
ನಗುವ ನೈದಿಲೆಯಾಗಿ ಸಹಿತ ನಕ್ಕಂತೆ...
ರಾಮಚಂದ್ರ ಸಾಗರ್
