Tuesday, 21 March 2017

ಕವಿತೆಯೆಂದರೇ..,...ಸಹೋದರ ಬಂಧುಗಳಿಗೆ 'ಕವಿತೆ ದಿನದ ಶುಭಾಶಯಗಳು'...

ಗೆಳತೀ...
ಕವಿತೆಯೆಂದರೆ ಪ್ರೇಮ ಮಂದಿರದೊಳಗೆ
ನಾ ಆರಾಧಿಸುವ ದೇವತೆಯು
ಕವಿತೆಯೆಂದರೆ ಒಲವ ಜಲಧಿಯೊಳಗೆ
ನೀ ಉದಿತ ದೇವತೆಯು..

ಕವಿತೆಯೆಂದರೆ ಎದೆಯೊಳಗೆ
ನೀ ಅರಳಿಸಿದ ಸವಿಕನಸು
ಕವಿತೆಯೆಂದರೆ ತಂಗಾಳಿಯೊಳಗೆ
ನೀ ಬೆರೆಸಿಸ ಸುಗಂಧವು..

ಕಾವ್ಯವೆಂದರೆ ಒಲವ ಜಗದೊಳಗೆ
ನೀ ತುಂಬಿದ ಪ್ರೀತಿಯ ರಂಗು
ಕಾವ್ಯವೆಂದರೆ ಹೂ ಬನದೊಳಗೆ
ನೀ ಕಂಪಿಸುವ ಮೆಲುಗಾಳಿಯು..

ಕವಿತೆಯೆಂದರೆ ಜಗದೊಳಗೆ
ಪ್ರೀತಿಬಂಧ ಬೆಸೆದ ಚೈತನ್ಯವು
ಕವಿತೆಯೆಂದರೆ ಜೀವಸೆಲೆಯೊಳಗೆ
ನವೋಲ್ಲಾಸ ಸಂಭ್ರಮದಾ ಹೊನಲು..

ಕವಿತೆಯೆಂದರೆ ಉಸಿರೊಳಗೆ
ನೀ ಬೆರೆಸಿದ ಅಮೃತವು
ಕವಿತೆಯೆಂದರೆ ಬದುಕೊಳಗೆ
ನೀ ನಗುವ ಮಲ್ಲಿಗೆಯು..
        
      ರಾಮಚಂದ್ರ ಸಾಗರ್