ನೋಡು ಗೆಳತಿ ಬಾನಲ್ಲಿ ಒಲವ ಗೋಪುರ ಕಟ್ಟಿ ದೇವತೆಗಳು ಹರಸುತ್ತಿದ್ದಾರೆ, ನೋಡು ನಮ್ಮದು ತುಂಬಾ ಗಟ್ಟಿಯಾದ ಪ್ರೀತಿ, ನಿರ್ಮಲ ಭಾವನೆಗಳ ಬೆಸುಗೆ, ನನಗೆ ನಿನ್ನಿಂದ ಪ್ರೀತಿಯೊಂದೆ ಸಾಕು, ನಿನ್ನ ನಗುಮೊಗದ ಸಾನಿಧ್ಯವಿದ್ದರೆ ಸಾಕು ಅಲ್ಲವೇ ಎನ್ನುತ್ತಾ ಭುಜದ ಮೇಲೆ ಭುಜವಿಟ್ಟು ಓಡುವ ಬಿಳಿ ಮೋಡಗಳ ನಡುವೆ ಆಕೆ ಏನೋ ಹುಡುಕಲು ಮತ್ತೆ ಮತ್ತೆ ತವಕಿಸಿದಂತೆ ನನ್ನ ಮನದಲ್ಲೂ ಅದೇ ಧ್ಯಾನ ಜೀವನವೆಂದರೆ ಇನ್ನೇನು, ನಿರ್ಮಲ ಮನದವಳ ಜೊತೆ ಬಾಳು ಮುಗಿಸಿದರೆ ಸಾಕಲ್ಲವೆ..? ಎಷ್ಟು ಹಣವಿದ್ದರೇನು, ಇಲ್ಲದಿದ್ದರೇನು, ಜೀವನದಲ್ಲಿ ನೆಮ್ಮದಿ ಮುಖ್ಯವಲ್ಲವೇ..ನಿರ್ಮಲ ಪ್ರೀತಿಯನ್ನು ನೀಡುವ ಬಾಳ ಗೆಳತಿಯ ಜೊತೆ ಇರುವಷ್ಟು ಕಾಲ ನೆಮ್ಮದಿಯಿಂದ ಬದುಕು ಸಾಗಿಸುವುದೇ ಮೇಲು, ಇರುವ ಸೀಮಿತದಲ್ಲೇ ಜೀವನದ ಸೌಂದರ್ಯದ ಮಹಲನ್ನು ಕಟ್ಟಬೇಕು, ಅದರಲ್ಲಿ ನಾನು ಮತ್ತು ಅವಳು ಪ್ರೀತಿಯಿಂದ ಬದುಕನ್ನು ಅರೆನಿಮಿಷಂದೆ ಕರಗಿಸಬೇಕು, ನೋವು ಬವಣೆಗಳು ಜಗಕೆ ಇರಲಿ, ನಮ್ಮದೇನಿದ್ದರೂ ಅತಿಯಾಸೆಯ ಒತ್ತಡ ಜೀವನ ಬೇಡ ಅಲ್ಲವೇ ಎಂದೆ. ಅವಳು ಹೌದು, ನೆಮ್ಮದಿಯಲ್ಲಿ ಪ್ರೀತಿಯ ಹಾರೈಕೆಯಲ್ಲಿ ಬಾಳಿನುದ್ದಕ್ಕೂ ನಗುತ್ತಾ ಸಾಗೋಣ, ಒತ್ತಡದ ಜೀವನವೇಕೆ, ನಮಗದು ಸಾದುವೂ ಅಲ್ಲ, ಜೀವನವನ್ನು ಸಂಪೂರ್ಣ ಒತ್ತಡದಲ್ಲೇ ಕಳೆದು ಕೊನೆಗೆ ಕೂಡಿಟ್ಟ ಸಂಪತ್ತು ಯಾವುದಕ್ಕೆ ಯೋಗ್ಯ, ಕೂಡಿಡುವುದಕ್ಕಿಂತ ಬೇಕಾದಷ್ಟು ಅಗತ್ಯವಿರುವಷ್ಟು ಬದುಕಿಗೆ ಅಣಿಮಾಡಿಕೊಳ್ಳೋಣ, ಅಗತ್ಯವಿಲ್ಲದ ನಿಧಿ ಸಂಗ್ರಹದ ಚಿಂತೆಯಲ್ಲಿ ಜಗದ ಸುಖವನ್ನು ತ್ಯಾಗಮಾಡಿ, ನನಗೆ ನೀನು, ನಿನಗೆ ನಾನು ನಿತ್ಯ ಪ್ರೀತಿಸದಿದ್ದರೆ, ಪ್ರೀತಿಯ ನುಡಿಗಳನ್ನು ನುಡಿಯದೇ ಓಡುವ ಸಂಗ್ರಾಮದ ಓಟದ ದುಡಿಮೆ ಬೇಡ, ಅತೀ ಸಣ್ಣ ಊರಾದರೂ ಸಾಕು ನಾವಿರುವಲ್ಲಿಯೇ ನಮಗಿರುವ ಸಣ್ಣ ಆಲಯಲ್ಲೇ ದುಡಿಯೋಣ, ದುಡಿಮೆ ಕಡಿಮೆ, ಅತೀ ಸಿರಿವಂತಿಕೆಯಿಲ್ಲವೆಂಬ ಕೊರಗು ಬೇಡ, ಕೊರಗಿನಲ್ಲೆ ಜೀವನ ಮುಗಿದರೆ ಬಾಳು ರೋಧನೆಯಲ್ಲೇ ಕರಗಿದರೆ ನಮಗೆ ದೊರೆತ ಅಮೂಲ್ಯ ಕ್ಷಣಗಳನ್ನು ನಾವು ಭುವಿಯಲ್ಲಿ ಅನುಭವಿಸದೇ ಹಾಗೆಯೇ ನಮ್ಮ ಪ್ರಯಾಣವನ್ನು ಈ ಲೋಕದಿಂದ ಮುಗಿಸುವುದು ಸಾದುವಲ್ಲ, ನಾವಿಬ್ಬರು ಪ್ರೀತಿಯ ನಮ್ಮ ಪುಟಾಣಿ ಮಂದಿರದಲ್ಲೇ ಸಣ್ಣ ದುಡಿಮೆಯನ್ನೇ ನಿಷ್ಠೆಯಿಂದ ಮಾಡೋಣ, ಅದರಲ್ಲೂ ನಮ್ಮಿಬ್ಬರ ಪ್ರೀತಿಯ ಬೆಸುಗೆಯಿರಲಿ, ಪರಸ್ಪರ ಸಹಕಾರವಿರಲಿ ಅಲ್ಲವೇ ಎಂದೆ, ಅವಳು ಹೌದು, ಪ್ರೀತಿಯಲ್ಲಿ ಎಲ್ಲಾ ಇದೆ, ಬದುಕಿಗೆ ಬೇಕಿರುವಷ್ಟು ಹಣವಿದ್ದರೆ ಸಾಕು, ಅತೀ ಆಸೆಯಲ್ಲಿ ಕೂಡಿಡುವ ಪಣಬೇಡ, ನಿನ್ನ ಮಾತು ಸತ್ಯ, ನಾವಿರುವ ನಾಡಿನಲ್ಲೇ, ನಮ್ಮ ದೇಶದಲ್ಲೇ ಪ್ರೀತಿಯಿಂದ ನಮಗಿರುವ ಅವಕಾಶದಲ್ಲೇ ದುಡಿಯುತ್ತಾ, ನಗುತ್ತಾ ಬಾಳನ್ನು ನಡೆಸೋಣ, ಒತ್ತಡದಲ್ಲಿ ನಡೆಸುವ ಜೀವನ ನಮಗೇಕೆ.. ಬಾಯಿತುಂಬ ನಾನು ನೀನು ಒಂದೆಡೆ ಕೂತು ಮಾತನಾಡಲು ಸಾಧ್ಯವಿಲ್ಲದಂತೆ ದುಡಿಮೆ ನಮಗೇಕೆ..? ಹೊಟ್ಟೆ ತುಂಬಿದರೆ ಸಾಕು, ಭವಿಷ್ಯಕೆ ತುಸು ಹೊನ್ನಿದ್ದರೆ ಸಾಕು, ನಾವೆಷ್ಟೇ ಓದಿದ್ದರೇನು, ಅದರ ಮೆಲುಕು ಬೇಡ, ವಿದೇಶಕ್ಕೆ ಹೋಗಿ ಗಳಿಸಿ ಇಲ್ಲಿ ಬಂದು ಅರಮನೆ ಕಟ್ಟುವ ಕನಸು ಬೇಡ, ಆ ಅರಮನೆ ಕಟ್ಟುವ ಕಾಯಕದಲ್ಲೆ ನಾನು ನೀನು ಬೆಂದು ಬಸವಳಿದು ದುಡಿವ ಕಾಯಕದಲ್ಲೇ ದಿನಕ್ಕೆ ನಾನು ನೀನು ಎಷ್ಟು ಬಾರಿ ಮಾತನಾಡಬಹುದು ಅಲ್ಲವೇ ಎಂದಳು. ಮನಕ್ಕೂ ಹೌದೆನ್ನಿಸಿತು. ವಿದೇಶದಲ್ಲಿ ಗಳಿಸಿ ನಮ್ಮೂರಿಗೆ ನಾವು ಪುನಃ ಬರುತ್ತೇವೋ ಇಲ್ಲವೊ ಗೊತ್ತಿಲ್ಲ.
ವಿದೇಶಕ್ಕೆ ದುಡಿಮೆಗೆಂದು ಇದ್ದುದನ್ನು ಬಿಟ್ಟು ಹೋದವರು ಬಂದಿದ್ದು ಕಡಿಮೆ, ಅವರ ಜೀವನವು ವೈಭವೋಪೇತವಾಗಿದ್ದರೂ ಅದು ನಮಗೆ ಬೇಡ, ನಮಗೆ ನಮ್ಮ ಬದುಕಿಗೆ ನೆಮ್ಮದಿ ಮುಖ್ಯ, ಹಣ ಮುಖ್ಯವಲ್ಲ ಎಂದಳು ಮನಕ್ಕೆ ಅವಳ ನುಡಿಯು ತೀರ ಆಪ್ತವೆನಿಸಿತು, ಬಿರುಬಿಸಿಲಿನಲ್ಲಿ ಸುರಿವ ಮಳೆಧಾರೆಯಂತೆ ಅವಳ ನುಡಿಯಲ್ಲಿ ಮನದ ಚಿತ್ತವು ಅವಳ ಹಿತಧಾರೆಗೆ ನಲಿಯುತ್ತಾ ಭುಜವನ್ನೂ ಅವಳ ಭುಜಕ್ಕೇ ಹಾಗೆಯೇ ತಾಕಿಸಿ ಕಡಲಲೆಗಳ ಎಣಿಸುತ್ತಾ ಬೀಸುವ ತಂಗಾಳಿಗೆ ತನುವೊಡ್ಡಿ ಹೀಗೆ ಕೂರುವ ಘಳಿಗೆಯಲ್ಲಿ ಎಷ್ಟು ಹಿತವಿದೆಯಲ್ಲವೇ..? ಹೌದು, ಒತ್ತಡದ ಕಾಯಕದಲ್ಲೆ ಅತೀಯಾಸೆಯಲ್ಲೇ ನಮ್ಮ ಬದುಕು ಮುಗಿದು ಹೋಗುವುದು ಬೇಡ, ಪ್ರೀತಿಯ ನಾವೆಯಲ್ಲಿ ನಾವಿಬ್ಬರು ತುಸು ಕಡಿಮೆ ಹೊನ್ನಾದರೂ ಸಾಕು ಅದರಲ್ಲೇ ಬದುಕು ಸಾಗಿಸೋಣ, ಬಾಳಿನುದ್ದಕ್ಕೂ ಪ್ರೀತಿಯ ಓರಣವು ಎದುರು ನೋಡೋಣ, ಪ್ರೀತಿಯ ಹಂದರದಲ್ಲೇ ಜಗವ ಮರೆಯೋಣವೆನ್ನುತ್ತಾ ಹರಟೆಹೊಡೆಯುತ್ತಾ ವಿದೇಶಕ್ಕೆ ಹೋಗುವ ಅತೀ ಗಳಿಸುವ ಆಸೆಯನ್ನು ಕೈಬಿಟ್ಟು ನಮ್ಮೂರ ನಮ್ಮ ಪುಟಾಣಿ ಆಲಯದಲ್ಲೇ ನಮ್ಮ ಕನಸಿನ ಗೂಡನ್ನು ಕಟ್ಟಿ ನಿತ್ಯ ಒಲವ ರಂಗೋಲಿ ಹಾಕಲು ನಾವು ಪಣತೊಡುತ್ತಾ .. ಪ್ರೀತಿಯ ಬದುಕಿಗೆ ಸೈ ಎಂದೆವು..ಬೀಸುವ ತಂಗಾಳಿಯು ಮೆತ್ತನೆ ಹೇಳಿತು ನೀವು ಬರುತಿರಿ ನಿತ್ಯವಿಲ್ಲಿಗೆಂದು..ಕಡಲಲೆಗಳು ಗುನುಗಿದವು ನೀವು ನಮ್ಮನ್ನೆಣಿಸಲು ಬರುತಿರಿ ನಿತ್ಯವೆಂದಂತೆ ಅನುಭವ..ಎಲ್ಲವೂ ನಿರ್ಮಲ ಒಲವು ಬೆಸೆದ ಮನಗಳ ಚಿತ್ತಾರ..

ರಾಮಚಂದ್ರ ಸಾಗರ್