Tuesday, 21 March 2017

ಕವಿತೆಯೆಂದರೇ..,...ಸಹೋದರ ಬಂಧುಗಳಿಗೆ 'ಕವಿತೆ ದಿನದ ಶುಭಾಶಯಗಳು'...

ಗೆಳತೀ...
ಕವಿತೆಯೆಂದರೆ ಪ್ರೇಮ ಮಂದಿರದೊಳಗೆ
ನಾ ಆರಾಧಿಸುವ ದೇವತೆಯು
ಕವಿತೆಯೆಂದರೆ ಒಲವ ಜಲಧಿಯೊಳಗೆ
ನೀ ಉದಿತ ದೇವತೆಯು..

ಕವಿತೆಯೆಂದರೆ ಎದೆಯೊಳಗೆ
ನೀ ಅರಳಿಸಿದ ಸವಿಕನಸು
ಕವಿತೆಯೆಂದರೆ ತಂಗಾಳಿಯೊಳಗೆ
ನೀ ಬೆರೆಸಿಸ ಸುಗಂಧವು..

ಕಾವ್ಯವೆಂದರೆ ಒಲವ ಜಗದೊಳಗೆ
ನೀ ತುಂಬಿದ ಪ್ರೀತಿಯ ರಂಗು
ಕಾವ್ಯವೆಂದರೆ ಹೂ ಬನದೊಳಗೆ
ನೀ ಕಂಪಿಸುವ ಮೆಲುಗಾಳಿಯು..

ಕವಿತೆಯೆಂದರೆ ಜಗದೊಳಗೆ
ಪ್ರೀತಿಬಂಧ ಬೆಸೆದ ಚೈತನ್ಯವು
ಕವಿತೆಯೆಂದರೆ ಜೀವಸೆಲೆಯೊಳಗೆ
ನವೋಲ್ಲಾಸ ಸಂಭ್ರಮದಾ ಹೊನಲು..

ಕವಿತೆಯೆಂದರೆ ಉಸಿರೊಳಗೆ
ನೀ ಬೆರೆಸಿದ ಅಮೃತವು
ಕವಿತೆಯೆಂದರೆ ಬದುಕೊಳಗೆ
ನೀ ನಗುವ ಮಲ್ಲಿಗೆಯು..
        
      ರಾಮಚಂದ್ರ ಸಾಗರ್

Friday, 17 March 2017

ನೀನೇ ಗೆಳತಿ..

ಕಡಲ ಕಿನಾರೆಯ ಮುಸ್ಸಂಜೆಯ ತಂಪಲಿ
 ಪ್ರೀತಿಸುವ ಇರಾದೆಯ ಮನದಲ್ಲಿ ನೂಕಿದವಳು
 ನಿನ್ನೊಲವ ರಂಗಿನ ಪ್ರೇಮದ ಶರಧಿಯಲಿ
ಪ್ರೇಮಿಸುವ ಬಯಕೆಯನು ಮನದಲ್ಲಿ ಬಿತ್ತಿದವಳು..
ನೀನೇ ಗೆಳತಿ..


ಸುರಿವ ಹನಿಯ ನವಿರು ನಾದಲ್ಲಿ
 ಪ್ರೇಮಗೀತೆಯ ಎದೆತುಂಬಿ ಹಾಡಿದವಳು
 ಪ್ರೀತಿಸುವ ಮನದ ತಳಿರು ಭಾವದಲ್ಲಿ
 ಪ್ರೀತಿಯ ಪದಗಳಿಗೆ ದನಿಯಾಗಿ ಬಂದವಳು
 ನೀನೇ ಗೆಳತಿ..


ಮುಂಜಾವಿನ ಸೊಬಗಿನ ಪಳಿಸುವ ಕಿರಣಗಳಲಿ
 ಪ್ರೀತಿಯ ಹಾರವನು ಪೋಣಿಸಿ ಎದುರಾದವಳು
 ಹೂಬನದ ಸುಗಂಧದ ನವಿರು ಕಂಪಲಿ
 ಪ್ರೇಮದ ಲೇಪವ ಮನದ ತುಂಬ ಸವರಿದವಳು..
ನೀನೇ ಗೆಳತಿ..


ತುಸು ನಗುವ ಸೊಬಗಲ್ಲಿ ನವ್ಯತೆಯ ಭಾವವರಳಿಸಿ
 ಭವ್ಯದಾ ಪಥದಲ್ಲಿ ಕೈಹಿಡಿದು ಕರೆದವಳು
 ಪ್ರೀತಿಸೆಲೆಯ ಮನದಲ್ಲಿ ಒಲವದೀಪವಾಗಿ
 ಪ್ರೀತಿಯಾ ಬದುಕಲ್ಲಿ ಬೆಳಕಾಗಿ ಮೂಡಿದವಳು..
ನೀನೇ ಗೆಳತಿ..


ಕಣ್ಣಲ್ಲಿ ಕಣ್ಣಿಟ್ಟು ಸವಿಘಳಿಗೆಯ ತಂದವಳು
 ಪ್ರೀತಿಯ ಇರಾದೆಯ ಮನದಲ್ಲಿ ತುಂಬಿದವಳು
 ಪ್ರೀತಿಸುವ ಮನಕೆ ಒಲವಧಾರೆಯಾಗಿ ಸುರಿದವಳು
 ಚೆಲುವ ಬದುಕಿಗೆ ತಂಗಾಳಿಯಾಗಿ ಬೀಸಿದವಳು
 ನೀನೇ ಗೆಳತಿ..


          ರಾಮಚಂದ್ರ ಸಾಗರ್

ಸರ್ವವೂ ನೀನು..

ಪ್ರೀತಿ ಮಳೆಯಲಿ ಮಮತೆಯ ಬೆಳಕಲಿ
 ಉದಿತ ಚೆಲುವ ಬೊಂಬೆಯು ನೀನು
 ನಗುತ ಬಳುಕವ ಬಳ್ಳಿಯು ನೀನು
ಒಲವಧಾರೆಯ ಸೊಬಗಲಿ ಚೆಲುವು
 ತುಂಬಿದವಳು ನೀ..
 
ನಗುವ ಚಂದಿರನ ಬಂಧದ ಒಲವಲಿ
 ಉಕ್ಕುವ ಜಲಧಿಯ ಪಳಿಸುವ ಪ್ರೀತಿಯಂತೆ
 ಪ್ರೀತಿಯ ಉಬ್ಬರವನು ಎಬ್ಬಿಸಿದವಳು ಎದೆಯಲಿ
 ಒಲವ ರಂಗನು ಜಳಪಿಸಿದವಳು ನೀನೇ..
 
ಪ್ರೀತಿಸುವ ಆಸೆಯನು ಅರಳಿಸಿದವಳು
 ಒಲವ ಸುಗಂಧ ಕಂಪಿಸುವವಳು ನೀನು
 ಪ್ರೀತಿಯ ಹಾರವನು ಸುರಿದವಳು
 ಪ್ರೀತಿಯ ಬದುಕಿಗೆ ಸ್ವಾಗತಿಸಿದವಳು ನೀನು.
 
ನವ್ಯತೆಯ ಹಾದಿಯನು ತೋರಿದವಳು
 ಭವ್ಯತೆಯ ಬಾಳನು ಬೆಳಗುವವಳು
 ಒಲವ ನಾವೆಗೆ ಹರಿಗೋಲಾದವಳು
 ಒಲವ ಮೇನೆಗೆ ಕರೆದೊಯ್ದವಳು ನೀನು..
 
         ರಾಮಚಂದ್ರ ಸಾಗರ್

Friday, 3 March 2017

ನೀ ಜೀವದಾತಳಾದೆ..

ನಸುನಗುತ ಒಲವನಾವೆಗೆ ನೀ ಸಾರಥಿಯಾದೆ
ಒಯ್ಯಾರದ ಬದುಕಿಗೆ ನೀ ಆರತಿಯಾದೆ
ಒಲವ ಪತಾಕೆಗೆ ನೀ ಬೆಂಗಾವಲಾದೆ
ಆಯಾಸದ ಮನಕೆ ನೀ ಚೈತನ್ಯವಾದೆ..

ಒಲವ ಆರಾಧನೆಗೆ ನೀ ಜೊತೆಯಾದೆ
ಸಂಭ್ರಮದ ಆಕಲನಕೆ ನೀ ಕಾರಣವಾದೆ
ಬರಹೇಳುವ ಕನಸುಗಳಿಗೆ ನೀ ಇಂಧನವಾದೆ
ಸೆಳೆವ ಪ್ರೇಮನೌಕೆಗೆ ನೀ ನಾವಿಕಳಾದೆ..

ಸುಖಿಸುವ ಬಾಳನು ಕರೆವವಳು ನೀನಾದೆ
ಸಾರುವೆಯಿಲ್ಲದ ದಾರಿಯನು ಕರುಣಿಸುವವಳು ನೀನಾದೆ
ನೋವಿಲ್ಲದ ದಾರಿಯಲಿ ನಡೆಸುವವಳು ನೀನಾದೆ
ಪ್ರೀತಿಸುವ ಪದಗಳಿಗೆ ಸ್ವರಮೇಳವು ನೀನಾದೆ..

ನೀ ಒಲವನಾಲೆಯ ತುಂಬುವಾ ಪ್ರೇಮಸೆಲೆಯಾದೆ
ನೀ ಒಲವನಾವೆಯ  ನಡೆಸುವಾ ಸೊಗಸುಗಾತಿಯಾದೆ
ನಾ  ಆಲಾಪಿಸುವ ಪದಗಳ ಗೀತೆಯು ನೀನಾದೆ
ನಾ ಆರಾಧಿಸುವ ಜೀವದ ಆವಾಸವು ನೀನಾದೆ..

ಪ್ರೇಮ ಜಲಧಿಯ ಅಲೆಯು ನೀನಾದೆ
ಪ್ರೀತಿ ಸವರುವ ತಂಗಾಳಿಯಾಗಿ ಬೀಸಿದೆ
ಮನ ರಮಿಸುವ ಬಾಳ ಗೆಳತಿಯಾದೆ
ಬರಹೇಳುವ ಬಾಳಿಗೆ ಜೀವದಾತಳಾದೆ..

ರಾಮಚಂದ್ರ ಸಾಗರ್