ಕನಸುಗಳೆಲ್ಲ ನಿನ್ನ ಸಾನಿಧ್ಯದಲೆ ಸದಾ ನಗುತಿರಲು
ಗೆಳತಿ ನೀ ಪ್ರೀತಿಯ ಅಮೃತಧಾರೆ ಈ ಬಾಳಲಿ
ಮನಸೆಲ್ಲ ನಿನ್ನ ಸಿಹಿ ನೆನಪಲೆ ನಲಿಯುತಿರಲು
ಒಲವ ಸಿಹಿಧಾರೆ ನೀನಾಗಿರಲು ಕೊರಗೇನು
ಜೀವದ ಉಸಿರೆ ನೀನಾಗಿರಲು ನೋವೇನು ?
ನಿನ್ನೊಲವ ಪರಿಮಳದ ಜಾಡು ಬಾಳೆಲ್ಲ ತುಂಬಿರಲು
ಪ್ರೀತಿಯ ಕಂಪು ಬಾಳಲ್ಲಿ ಸದಾ ನೆಲೆಯಾಗಿರಲು
ಇರುಳಮಾಲೆ ಬಾಳಲ್ಲಿ ಕೊಂಚ ನುಸುಳುವುದೇನು
ನಿನ್ನೊಲವ ಬೆಳದಿಂಗಳು ಸದಾ ಸುರಿಯುತಿರಲು
ಬಾಳಲಿ ಕೊಂಚ ನೋವು ಉಳಿವುದೇನು ?
ಪ್ರೀತಿಯ ಹೂಬಳ್ಳಿ ಬಾಳಲಿ ಸದಾ ನಗುತಿರಲು
ನಿನ್ನೊಲವ ಕಂಪು ನನ್ನೆದೆಗೆ ಇಂಪು ತರುತಿರಲು
ಪ್ರೀತಿಯ ಹೂಬಳ್ಳಿ ಅರಳಿ ನಲಿಯುತಿರಲು
ಒಲವ ಕಂಪು ಬಾಳಲಿ ಸದಾ ಬೀಸುತಿರಲು
ಬಾಳಲಿ ತುಸು ನೋವಿಗೆ ಜಾಗ ಉಳಿವುದೇನು ?
ಒಲವಗಾನದ ಉಸಿರು ಬಾಳಲಿ ಮೊಳಗುತಿರಲು
ನಿನ್ನೊಲವ ಸಾನಿಧ್ಯ ಬಾಳಿಗೊಲಿದು ನಗುತಿರಲು
ಅನುರಾಗದ ಗಾನವು ನಿತ್ಯ ಬಾಳ ಚೈತನ್ಯವಾಗಿರಲು
ಕನಸುಗಳೆಲ್ಲ ಮತ್ತೆ ಎದೆಯಲಿ ಮರು ಹುಟ್ಟು ಕಾಣುತಿರಲು
ಸಿಹಿ ಕನಸುಗಳ ಮೆರವಣಿಗೆ ನಿತ್ಯ ಸಾಗುತಿರಲು
ಕಹಿ ಎಂಬುದನು ಮನ ತುಸು ಆಲಿಸುವುದೇನು ?
ರಾಮಚಂದ್ರ ಸಾಗರ್
ಗೆಳತಿ ನೀ ಪ್ರೀತಿಯ ಅಮೃತಧಾರೆ ಈ ಬಾಳಲಿ
ಮನಸೆಲ್ಲ ನಿನ್ನ ಸಿಹಿ ನೆನಪಲೆ ನಲಿಯುತಿರಲು
ಒಲವ ಸಿಹಿಧಾರೆ ನೀನಾಗಿರಲು ಕೊರಗೇನು
ಜೀವದ ಉಸಿರೆ ನೀನಾಗಿರಲು ನೋವೇನು ?
ನಿನ್ನೊಲವ ಪರಿಮಳದ ಜಾಡು ಬಾಳೆಲ್ಲ ತುಂಬಿರಲು
ಪ್ರೀತಿಯ ಕಂಪು ಬಾಳಲ್ಲಿ ಸದಾ ನೆಲೆಯಾಗಿರಲು
ಇರುಳಮಾಲೆ ಬಾಳಲ್ಲಿ ಕೊಂಚ ನುಸುಳುವುದೇನು
ನಿನ್ನೊಲವ ಬೆಳದಿಂಗಳು ಸದಾ ಸುರಿಯುತಿರಲು
ಬಾಳಲಿ ಕೊಂಚ ನೋವು ಉಳಿವುದೇನು ?
ಪ್ರೀತಿಯ ಹೂಬಳ್ಳಿ ಬಾಳಲಿ ಸದಾ ನಗುತಿರಲು
ನಿನ್ನೊಲವ ಕಂಪು ನನ್ನೆದೆಗೆ ಇಂಪು ತರುತಿರಲು
ಪ್ರೀತಿಯ ಹೂಬಳ್ಳಿ ಅರಳಿ ನಲಿಯುತಿರಲು
ಒಲವ ಕಂಪು ಬಾಳಲಿ ಸದಾ ಬೀಸುತಿರಲು
ಬಾಳಲಿ ತುಸು ನೋವಿಗೆ ಜಾಗ ಉಳಿವುದೇನು ?
ಒಲವಗಾನದ ಉಸಿರು ಬಾಳಲಿ ಮೊಳಗುತಿರಲು
ನಿನ್ನೊಲವ ಸಾನಿಧ್ಯ ಬಾಳಿಗೊಲಿದು ನಗುತಿರಲು
ಅನುರಾಗದ ಗಾನವು ನಿತ್ಯ ಬಾಳ ಚೈತನ್ಯವಾಗಿರಲು
ಕನಸುಗಳೆಲ್ಲ ಮತ್ತೆ ಎದೆಯಲಿ ಮರು ಹುಟ್ಟು ಕಾಣುತಿರಲು
ಸಿಹಿ ಕನಸುಗಳ ಮೆರವಣಿಗೆ ನಿತ್ಯ ಸಾಗುತಿರಲು
ಕಹಿ ಎಂಬುದನು ಮನ ತುಸು ಆಲಿಸುವುದೇನು ?
ರಾಮಚಂದ್ರ ಸಾಗರ್