ಪಾಕಿಸ್ತಾನ ಕಾಶ್ಮೀರದಲ್ಲಿ ಉಗ್ರವಾದಿ ಕೃತ್ಯಕ್ಕೆ ಒತ್ತು ನೀಡುತ್ತಾ ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ ಬೆಂಬಲವಾಗಿ ನಿಂತಿದೆ, ಕಾಶ್ಮೀರ ತನ್ನದೇ ಭೂಮಿಯೆಂದು ಬೊಬ್ಬೆ ಹೊಡೆಯುತ್ತಾ ಜಗತ್ತಿನೆಲ್ಲೆಡೆ ಕಾಶ್ಮಿರದ ವಿಷಯವನ್ನು ಪ್ರಸ್ತಾಪಿಸುತ್ತದೆ. ಕಾಶ್ಮೀರದಲ್ಲಿ ಭಾರತ ಕೈಗೊಂಡ ಉತ್ತಮ ಕಾರ್ಯಗಳನ್ನು ಅಲ್ಲಿನ ಜನರು ವಿರೋಧಿಸುವಂತೆ ಪ್ರೇರಣೆ ನೀಡುತ್ತಾ ಸಾಗುತ್ತಿದೆ. ಇತಿಹಾಸದಿಂದಲೇ ಪಾಕಿಸ್ತಾನದ ಉಗ್ರತನ ಮತ್ತು ಭೂಮಿ ಮೇಲಿನ ಅತಿಯಾಸೆಯನ್ನು ನಾವು ಕಾಣಬಹುದು, ಇದಕ್ಕೆ ಉತ್ತಮ ಉದಾಹರಣೆ ಬಲೋಚಿಸ್ತಾನ್. ಈ ಪ್ರದೇಶದ ಮೇಲೆ ಪಾಕಿಸ್ತಾನ ಅತಿಕ್ರಮಣ ಮತ್ತು ಇಂದಿನವರೆಗೆ ಅಲ್ಲಿ ಅದು ನಡೆಸುತ್ತಿರುವ ನರಮೇದ. ಅಷ್ಟಕ್ಕೂ ಈ ಬಲುಚಿಸ್ತಾನ್ ಪ್ರದೇಶ ಎಲ್ಲಿದೆ ಗೊತ್ತೆ..? ಈ ಪ್ರದೇಶ ಪೂರ್ವದಲ್ಲಿ ಈಗಿನ ಪಾಕಿಸ್ತಾನದ ಸಿಂದ್ ಮತ್ತು ಪಂಜಾಬ್ ಪ್ರಾಂತ್ಯ, ಉತ್ತರದಲ್ಲಿ ಫೆಡರಲ್ ಆಡಳಿತದ ಬುಡಕಟ್ಟು ಪ್ರದೇಶ ಮತ್ತು ಪಶ್ಚಿಮದಲ್ಲಿ ಅಪ್ಘಾನಿಸ್ತಾನದೊಂದಿಗೆ ಗಡಿ ಹಂಚಿಕೊಂಡಿದೆ. ಇದು ಸುಮಾರು 3.47 ಲಕ್ಷ ಕಿ.ಮೀ ವಿಸ್ತೀರ್ಣದ ಪ್ರದೇಶವಾಗಿದ್ದು ಇಂದಿನ ಪಾಕಿಸ್ತಾನದ ಶೇ46% ಪ್ರದೇಶವಾಗಿದೆ. ಜನಸಂಖ್ಯೆ 1.30 ಕೋಟಿ ಜನರಿದ್ದಾರೆ. ಬ್ರಿಟೀಷ್ ಆಡಳಿತದಲ್ಲಿ ಅಖಂಡ ಭಾರತದೊಂದಿಗೆ ಸೇರದೇ ಪ್ರತ್ಯೇಕವಿದ್ದ ಬ್ರಿಟೀಷ್ ಆಡಳಿತದ ಪ್ರದೇಶವಾಗಿದ್ದು, ನಾಲ್ಕು ಜಿಲ್ಲೆಗಳನ್ನು ಒಳಗೊಂಡಿತ್ತು, ಅವುಗಳು ಹೀಗಿವೆ, ಕಲಾತ್, ಲಸ್ಬೇಲಾ, ಖಾರಣ್ ಮತ್ತು ಮಕ್ರಾನ್. ಕಲಾತ್ ಪ್ರದೇಶದ ದೊರೆ ಅಥವಾ ಖಾನ್ ಈ ನಾಲ್ಕೂ ಪ್ರದೇಶಗಳ ಮೇಲೆ ಹಿಡಿತ ಸಾಧಿಸಿ ಆಡಳಿತ ನಡೆಸುತ್ತಿದ್ದ. ಈತ ಬ್ರಿಟೀಷ್ ಆಡಳಿತದೊಂದಿಗೆ ಉತ್ತಮ ಸಂಬಂಧ ಹೊಂದಿ ಪ್ರಾಂತ್ಯಕ್ಕೆ ಪ್ರತ್ಯೇಕ ಸ್ವಾಯತ್ತತೆ ಗಳಿಸಿದ್ದ. ಈ ಪ್ರದೇಶ ಖನಿಜ ನಿಕ್ಷೇಪಗಳ ಸಮೃದ್ಧ ಭುಮಿಯಾಗಿದ್ದು, ಸಮೃದ್ಧ ಚಿನ್ನ, ತಾಮ್ರ, ತೈಲ ಮತ್ತು ನೈಸರ್ಗಿಕ ಅನಿಲಗಳನ್ನು ಒಳಗೊಂಡಿದೆ.
ಬ್ರಿಟೀಷ್‍ರು ದೇಶ ಬಿಟ್ಟು ಹೋಗುವಾಗ ಮುಸ್ಲಿಂ ಲೀಗ್ ಪಕ್ಷದ ನಾಯಕ ಮಹಮ್ಮದ್ ಅಲಿ ಜಿನ್ನಾ ಜೊತೆ ಮಾಡಿಕೊಂಡ ಒಪ್ಪಂದದಂತೆ ದೇಶವನ್ನು ಇಬ್ಬಾಗ ಮಾಡಿದರು. ಅದರಂತೆ ಮುಸ್ಲಿಂ ಬಾಹುಳ್ಯವುಳ್ಳ ಪ್ರದೇಶಗಳನ್ನು ಇಂಡಿಯಾ ಇಂಡಿಪೆಂಡೆನ್ಸ್ ಆಕ್ಟ್ 1947 ರಂತೆ ಎರಡು ಶರತ್ತುಗಳೊಂದಿಗೆ ಪಾಕಿಸ್ತಾನವೆಂದು ಭಾಗ ಮಾಡಿದರು. ಇದರಲ್ಲಿ ಒಳಗೊಂಡ ಮೊದಲ ಶರತ್ತು ಸಿಂದ್ ಮತ್ತು ಬಲೋಚಿಸ್ತಾನ್ ಒಪ್ಪಿದರೇ ಮಾತ್ರವೇ ಉದ್ದೇಶಿತ ಪಾಕಿಸ್ತಾನದ ಭಾಗ ಮತ್ತು ಎರಡನೇ ಶರತ್ತು ಫೆಡರಲ್ ಆಡಳಿತದ ಬುಡಕಟ್ಟು ಪ್ರದೇಶದ ಜನರ ಮತಗಣನೆ ನಡೆಸಿ ಅವರು ಒಪ್ಪಿದರೆ ಮಾತ್ರವೇ ಅದನ್ನು ಉದ್ದೇಶಿತ ಪಾಕಿಸ್ತಾನದ ಭಾಗವೆಂದು ಹೇಳಲಾಗಿದೆ. ಈ ಶರತ್ತುಗಳ ಆಧಾರದಲ್ಲಿ ಒಟ್ಟು ಐದು ಪ್ರಾಂತ್ಯಗಳು ಉದ್ದೇಶಿತ ಪಾಕಿಸ್ತಾನಕ್ಕೆ ವಿಭಜಿಸಲಾಯಿತು, (1) ಸಿಂದ್ ಪ್ರಾಂತ್ಯ- ಒಪ್ಪಿಗೆ ಪಡೆಯುವ ಶರತ್ತಿಗೆ ಒಳಪಟ್ಟು (2) ಮುಸ್ಲಿಂ ಬಾಹುಳ್ಯದ ಪಂಜಾಬ್ ಪ್ರದೇಶ(3)ಫೆಡರಲ್ ಆಡಳಿತದ ಬುಡಕಟ್ಟು ಪ್ರದೇಶ-ಮತಗಣನೆ ನಡೆಸಿ ಜನಾಭಿಪ್ರಾಯ ಪಡೆಯುವ ಶರತ್ತು (4) ಪೂರ್ವ ಪಾಕಿಸ್ತಾನ್ ಅಂದರೆ ಮುಸ್ಲಿಂ ಬಾಹುಳ್ಯದ ಬಂಗಾಳದ ಪ್ರದೇಶ ಇದನ್ನು ಬಂಗೀಸ್ತಾನ್ ಎಂತಲೂ ಕರೆದರು ಇದರ ಜೊತೆಗೆ (5) ಬಲೋಚಿಸ್ತಾನ್-ಜನಾಭಿಪ್ರಾಯ ಪಡೆಯುವ ಶರತ್ತಿನ ಮೇಲೆ ಸೇರಿಸಿದರು. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಕಾಶ್ಮೀರವನ್ನು ಈ ಸಮಯದಲ್ಲಿ ಬ್ರಿಟೀಷ್ ಆಡಳಿತ ಪಾಕಿಸ್ತಾನಕ್ಕೆ ಭಾಗ ಮಾಡಿ ನೀಡಿರಲಿಲ್ಲ. ಅದೂ ಹಾಗೆಯೇ ಅಖಂಡ ಭಾರತದ ಭಾಗವಾಗಿ ಉಳಿದಿತ್ತು. ಹೀಗೆ ವಿಭಜಿಸಲಾದ ಒಟ್ಟು ಐದು ಪ್ರದೇಶಗಳಲ್ಲಿ ಮೂರರಲ್ಲಿ ಅಂದರೆ ಸಿಂದ್, ಫೆಡರಲ್ ಆಡಳಿತದ ಬುಡಕಟ್ಟು ಪ್ರದೇಶ, ಬಲೋಚಿಸ್ತಾನ್‍ನಲ್ಲಿ ಪಾಕಿಸ್ತಾನ ಜನಾಭಿಪ್ರಾಯ ಪಡೆಯಬೇಕಾಗಿತ್ತು. ಸಿಂದ್ ಪ್ರಾಂತ್ಯ ಮಾತ್ರವೇ ಉದ್ದೇಶಿತ ಪಾಕಿಸ್ತಾನಕ್ಕೆ ಸೇರಲು ಒಪ್ಪಿಗೆ ಸೂಚಿಸಿತು, ಫೆಡರಲ್ ಆಡಳಿತದ ಬುಡಕಟ್ಟು ಪ್ರದೇಶದಲ್ಲಿ ಪಾಕಿಸ್ತಾನ ಮತಗಣನೆ ನಡೆಸುವ ಗೋಜಿಗೆ ಹೋಗದೇ ಹಾಗೆಯೇ ದಿನದೂಡಿತು, ಮತ್ತು ಬಲೋಚಿಸ್ತಾನ್ ಪ್ರಾಂತ್ಯ ಮಾತ್ರ ಉದ್ದೇಶಿತ ಪಾಕಿಸ್ತಾನ ಭಾಗವಾಗಲು ಒಪ್ಪದೇ ಹಾಗೆಯೇ ಉಳಿಯಿತು, ಬಲೋಚಿಸ್ತಾನ್‍ನ ಕಲಾತ್ ದೊರೆ ಪ್ರತ್ಯೇಕ ಬಲೋಚಿಸ್ತಾನ್ ದೇಶ ರಚನೆಯ ಇಂಗಿತದಲ್ಲಿ ಇಂಡಿಯಾ ಇಂಡಿಪೆಂಡೆನ್ಸ್ ಆಕ್ಟ್ 1947 ರಂತೆ ಪ್ರತ್ಯೇಕವಾಗಿಯೇ ಉಳಿದ.
ಆದರೆ ಅಕ್ಟೋಬರ್ 1947 ರಿಂದ ಪಾಕಿಸ್ತಾನದೊಳಗಿನ ಸಿಂದ್ ಮತ್ತು ಪಂಜಾಬ್ ಪ್ರಾಂತ್ಯದ ಜನರು ಅಗಾಧ ನಿಕ್ಷೇಪ ಹೊಂದಿದ ಮತ್ತು ಬಹು ವಿಸ್ತೀರ್ಣದ ಬಲೋಚಿಸ್ತಾನ್ ಪ್ರದೇಶವನ್ನು ದೇಶದ ಭಾಗವಾಗಿಸಬೇಕೆಂದು ದಂಗೆಯೆದ್ದರು. ಅನೇಕ ದಂಗೆಕೋರ ಸಂಘಟನೆಗಳು ಉದ್ಭವವಾದವು. ಇದೇ ಸಮಯದಲ್ಲಿ ಬಲೋಚಿಸ್ತಾನ್ ಅತಿಕ್ರಮಣಕ್ಕೆ ಅನೇಕ ಸಿಂದ್ ದಂಗೆಕೋರರು ಮುಗಿಬೀಳುತ್ತಾರೆ, ಅಂತಿಮವಾಗಿ ಪಾಕಿಸ್ತಾನದ ಸೇನೆ 1948ರಲ್ಲಿ ಅತಿಕ್ರಮಣ ಮಾಡುತ್ತದೆ, ನಿರಂತ ಮೂರು ತಿಂಗಳು ನರಮೇದ ನಡೆಸಿ ಏಪ್ರಿಲ್ 1 1948 ರಂದು ತನ್ನ ಭಾಗವಾಗಿ ಬಲೋಚಿಸ್ತಾನ್ ಪ್ರದೇಶವನ್ನು ಸೇರಿಸಿಕೊಳ್ಳುತ್ತದೆ. ಪಾಕಿಸ್ತಾನದ ಭಾಗವಾಗಿ ಒಪ್ಪದ ಅನೇಕ ಜನರ ಮೇಲೆ ಪಾಕಿಸ್ತಾನ ವಾಯು ಸೇನೆ ಅಂದು ಬಾಂಬುಗಳನ್ನು ಎಸೆಯುತ್ತದೆ, ಮುಗ್ದ ಅಮಾಯಕ ಜನರನ್ನು ಕೊಲ್ಲುತ್ತದೆ, ಪಾಕಿಸ್ತಾನದ ಸೇನೆ ಕಿಂಚಿತ್ತು ಕರುಣೆ ತೋರದೇ ಮಹಿಳೆಯರ ಅತ್ಯಾಚಾರ ಮಾಡುತ್ತದೆ. ಇದೇ ಸಮಯದಲ್ಲಿ ಅನೇಕ ಲಕ್ಷ ಬಲೂಚಿಸ್ತಾನಿಗಳು ಹೆದರಿ ದೇಶಬಿಟ್ಟು ಇರಾನ್, ಅಪ್ಘಾನ್ ಸೇರಿದಂತೆ ಜಗತ್ತಿನ ಅನೇಕ ದೇಶಗಳಿಗೆ ವಲಸೆ ಹೋಗುತ್ತಾರೆ, ಮತ್ತೂ ಇಂದಿಗೂ ಪ್ರತ್ಯೇಕ ಬಲೂಚಿಸ್ತಾನ್ ಪ್ರಾಂತ್ಯಕ್ಕಾಗಿ ಹೋರಾಡುತ್ತಿದ್ದಾರೆ. ನಿತ್ಯ ಬಲೋಚಿಸ್ತಾನ್ ಪ್ರಾಂತ್ಯ ಇಂದಿಗೂ ಪಾಕಿಸ್ತಾನದ ಸೇನೆ ಮತ್ತು ಸ್ಥಳೀಯ ಬಲೋಚಿಗಳ ನಡುವೆ ಕಾಳಗ ನಡೆಯುತ್ತದೆ. ಬಲೂಚಿಗಳು ಗೆರಿಲ್ಲಾ ಮಾದರಿಯಲ್ಲಿ ಪಾಕಿಸ್ತಾನ ಸೇನೆಯೊಂದಿಗೆ ಹೋರಾಡುತ್ತಾರೆ. ಇಲ್ಲಿ ನಿತ್ಯ ಕಾಶ್ಮೀರಕ್ಕಿಂತಲೂ ಅತೀ ಕೆಟ್ಟ ಪರಿಸ್ಥಿತಿ ಇದೆ. ನಿತ್ಯ ದಂಗೆ, ಸ್ಪೋಟಕ ಸಾಮಾನ್ಯ. 1947ರಲ್ಲಿ ಸುಮಾರು 2 ಕೋಟಿ ಜನರಿದ್ದ ಬಲೋಚಿಗಳು ಇಂದು 1.30 ಕೋಟಿಯಾಗಿದ್ದಾರೆ. ಅಂದರೆ ಅವರ ಸಂಖ್ಯೆ ಸುಮಾರು 7 ದಶಕಗಳು ಕಳೆದರೂ ವೃದ್ಧಿಸದೇ ಕ್ಷಯವಾಗಿದೆ. ಕಾರಣ ಪಾಕಿಸ್ತಾನ ಹತ್ಯಾಕಾಂಡ. ನಿತ್ಯ ಅತ್ಯಾಚಾರ, ಸಾಮೂಹಿಕವಾಗಿ ಸಾರ್ವಜನಿಕರ ಮೇಲೆ ವಾಯು ಸೇನೆ ಬಾಂಬುಗಳ ಮಳೆಗರೆಯುವ ಮೂಲಕ ಸುಮಾರು ಏಳು ದಶಕಗಳಲ್ಲಿ ಬಲೂಚಿಗಳ ಸ್ವಾತಂತ್ರ್ಯ ಹೋರಾಟವನ್ನು ಪಾಕಿಸ್ತಾನ ನಿರ್ದಯವಾಗಿ ಹತ್ತಿಕ್ಕುತ್ತಿದೆ.
ಆದರೆ ಇದ್ಯಾವುದನ್ನೂ ಯುನೈಟೆಡ್ ಕಿಂಗ್‍ಡಮ್ ಪ್ರಶ್ನಿಸುವುದಿಲ್ಲ, ಯುನೈಟೆಡ್ ನೇಶನ್ಸ ಬಲೋಚಿಸ್ತಾನ್‍ನಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಖಂಡಿಸಿದರೂ ಮಧ್ಯೆ ಪ್ರವೇಶಿಸುತ್ತಿಲ್ಲ. ಏನೇ ಆದರೂ ತನ್ನದಲ್ಲದ ಭೂಮಿಯನ್ನು ಒತ್ತಾಯವಾಗಿ ಇಟ್ಟುಕೊಂಡು ಬಲೋಚಿಗಳ ಮೇಲೆ ನಿತ್ಯ ಸಂಹಾರ ನಡೆಸುತ್ತಿರುವ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಬಲೋಚಿಸ್ತಾನ್ ವಿಷಯನ್ನು ಪ್ರಧಾನಿ ಮೋದಿ ಸ್ವಾತಂತ್ರೋತ್ಸವದ ಭಾಷಣದಲ್ಲಿ ಮುಖ್ಯ ವಿಷಯವಾಗಿ 2016ರಲ್ಲಿ ಹೇಳುತ್ತಾ ವಿಶ್ವದ ಗಮನವನ್ನು ಬಲೋಚಿಸ್ತಾನ್ ಕಡೆ ಸೆಳೆಯುತ್ತಾರೆ. ಮೋದಿಯವರ ಮಾತನ್ನು ವಿಶ್ವದೆಡೆ ಬಲೋಚಿಗಳು ಸಂಭ್ರಮಿಸಿ ಸ್ವಾಗತಿಸುತ್ತಾರೆ, ಮತ್ತು ಪ್ರತ್ಯೇಕ ಬಲೂಚಿಸ್ತಾನ್ ಹೋರಾಟಕ್ಕೆ ಭಾರತದ ಬೆಂಬಲ ಕೋರುತ್ತಾರೆ. ಇದೇ ರೀತಿ ಜನ ಮತಗಣನೆ ನಡೆಸದೇ ಫೆಡರಲ್ ಆಡಳಿತದ ಬುಡಕಟ್ಟು ಪ್ರದೇಶವನ್ನು ಪಾಕಿಸ್ತಾನ ಹಾಗೆಯೇ ಉಳಿಸಿಕೊಂಡಿದೆ, ಇದರ ಬಗ್ಗೆ ಆಗಾಗ್ಗೆ ಏಳುವ ದಂಗೆಗಳನ್ನು ಬಹಳ ನಿರ್ದಾಕ್ಷೀಣ್ಯವಾಗಿ ಬಗ್ಗುಬಡಿಯುತ್ತದೆ, ಒಟ್ಟಾರೆ ಇಂಡಿಯಾ ಒಂಡಿಪೆಂಡೆನ್ಸ ಆಕ್ಟ್ 1947ರಂತೆ ವಿಧಿಸಿದ ಒಂದೂ ಶರತ್ತನ್ನು ಪೂರೈಸದೇ ಪಾಕಿಸ್ತಾನ ಬರೀ ಹಿಂಸೆ ಹತ್ಯಾಕಾಂಡದಿಂದ ಬಲೂಚಿಸ್ತಾನ್ ಪ್ರದೇಶವನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡಿದೆ. ಇದಕ್ಕೆ ವಿಶ್ವ ಸಮುಧಾಯ ಮೌನ ಮುರಿದು ಬಲೂಚಿಗಳ ಹೋರಾಟಕ್ಕೆ ಬೆಂಬಲ ನೀಡಿ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಬಲೋಚಿಸ್ತಾನ್ ಪ್ರಾಂತ್ಯದಲ್ಲಿ ನಿಲ್ಲುವಂತೆ ಮಾಡಬೇಕು.
ರಾಮಚಂದ್ರ ಸಾಗರ್
