Sunday, 26 February 2017

ನೀ ನಲಿಯುತ ಬಂದಾಗ.

ನೀ ನಲಿಯುತ ಬಂದಾಗ ನನ್ನೆದೆಯ ಗೂಡಲ್ಲಿ 
ಸಾವಿರ ಕವಿತೆಯ ಜನನ..ಒಲವಗಾಥೆಯ ಗಾನ

ನೀ ನಗುತ ಜೊತೆಯಾದಾಗ ಪ್ರೀತಿಸುವ ಮನದಲ್ಲಿ
ಸಾವಿರ ಕನಸುಗಳ ಜನನ..ಸಿಹಿ ಕನಸುಗಳ ನರ್ತನ

ನೀ ಕೈಹಿಡಿದು ನಡೆಸುವಾಗ ಸಾಗುವ ಹಾದಿಯಲ್ಲಿ
ಹೂಮಳೆಯ ಸಂಭ್ರಮ..ಹೂಧಾರೆಯಲ್ಲಿ ಮನ ನಲಿದ ಸಡಗರ

ನೀ ಗುನಗುತ ನಡೆವಾಗ ನಿನ್ನ ನವಿರು ದನಿಯಲ್ಲಿ
ಮನಸೋತ ಕುರುಹೂ..ಹೃದಯಕೆ ನೀನೆ ಬೇಕೆಂಬ ಹಠವು

ನೀ ಸನಿಹ ಬಂದಾಗ ಪ್ರೀತಿಯ ಜಾಡಲ್ಲಿ
ಪ್ರೇಮ ಜಲಧಿಯ ಉಬ್ಬರ..ನಿನ್ನೊಲವ ರಂಗಿನ ಪರಿಮಳ

ನೀ ಮುಸ್ಸಂಜೆಯಲಿ ಎದುರಾದಾಗ ಸಂಧಿಸುವ ಕಣ್ಣೋಟದಲಿ
ಪ್ರೇಮ ಸಜಾದ ಹುನ್ನಾರ..ಹೃದಯ ಬೆಸೆವ ಆವೇದನಾ..

        ರಾಮಚಂದ್ರ ಸಾಗರ್