ಕಣ್ಣಿನ ಕಾತರದಲ್ಲಿ ನಿನ್ನದೇ ಧ್ಯಾನವಿದೆ ಕಾಣದೆ ಕೊಲ್ಲದಿರು ಗೆಳೆಯ
ಕನಸಿನ ಊರಿನಲ್ಲಿ ನಿನ್ನದೇ ಅನುರಾಗದ ಅನುಪಮ ನೆನಪಿದೆ ಕೇಳು ಬಾ ಗೆಳೆಯ
ಮೌನದ ಮಾತಿನಲ್ಲಿ ನಿನ್ನದೇ ಹೆಸರಿನ ಜಪವಿದೆ ಆಲಿಸು ಬಾ ಗೆಳೆಯ
ಹೃದಯದ ಗೂಡಿನಲ್ಲಿ ನಿನ್ನದೇ ಒಲವಿನ ಹೂ ಕಂಪಿಸುತಿದೆ ಘಮಿಸು ಬಾ ಗೆಳೆಯ
ಪ್ರೇಮದ ಹಾದಿಯಲ್ಲಿ ನಿನ್ನದೇ ಬೆಳದಿಂಗಳು ಚೆಲ್ಲಿದೆ ಜೊತೆಯಾಗು ಬಾ ಗೆಳೆಯ
ಪ್ರೀತಿಯ ಅಮಲಿನಲ್ಲಿ ನಿನ್ನದೇ ಸ್ನೇಹದ ಸವಿಯಿದೆ ಸಂತೈಸು ಬಾ ಗೆಳೆಯ
ರಚನೆ: ರಾಮಚಂದ್ರ ಸಾಗರ್