ಪ್ರೀತಿಸುವ
ಹೃದಯದಲ್ಲಿ ನಿತ್ಯ ಸಾವಿರ ಕನಸುಗಳ ನರ್ತನವಾಗುತ್ತದೆ.
ಜೊತೆ ಬಯಸುವ
ಜೀವದ ಸಾನಿಧ್ಯವನ್ನೇ ಸದಾ ಮನ ಕನಸು ಕಾಣುತ್ತದೆ.
ಹಗಲು, ರಾತ್ರಿ
ಹೃದಯದಲ್ಲಿ ಕನಸುಗಳೇ ಉಸಿರಾಗಿ ದನಿಸುತ್ತವೆ.
ಪ್ರೇಮದ ಹೂವುಗಳು
ಅರಳಿ ಘಮಿಸುತ್ತಾ ಕನಸಿಗೆ ಹಾರೈಸುತ್ತವೆ.
ಕನಸಿನ ಹಾದಿಯಲ್ಲಿ
ಬೆಳುದಿಂಗಳ ಚೆಲುವು ಕಳೆಯೇರಿ ಮನ ರಮಿಸುತ್ತದೆ.
ಬಯಕೆಯ ಕಡಲಿನಲ್ಲಿ
ಮುಗ್ಧ ಮನದ ಕನಸುಗಳಿಗೆ ಪ್ರೇಮವೇ ದೈವವಾಗುತ್ತದೆ.
ಸುರಿವ ಮಳೆಯಲ್ಲಿ
ಪ್ರತಿ ಹನಿಯು ಪ್ರೇಮದ ಅಮೃತವಾಗಿ ಕಂಗೊಳಿಸುತ್ತದೆ.
ಮಿಂಚಿನ ಬೆಳಕಲ್ಲಿ
ಪ್ರಿಯತಮೆಯ ಅಂದವಾದ ಮೊಗದ ದರ್ಶನವಾಗುತ್ತದೆ.
ಬೀಸುವ ತಂಗಾಳಿಯಲ್ಲಿ
ಪ್ರೇಮದ ಶುಭದ ಸ್ವರಮೇಳವೇ ಉದಿತವಾಗುತ್ತದೆ.
ಮುಸ್ಸಂಜೆಯ
ಕಡಲ ತಡಿಯಲ್ಲಿ ಮನದ ಕನಸುಗಳಿಗೆ ಪ್ರಕೃತಿ ರಂಗೇರಿಸಿ ನಲಿಸುತ್ತದೆ..
ಜೊತೆಯಾದ
ಜೀವ ಅರೆಕ್ಷಣ ಕಾಣದಿದ್ದರೂ ಮನ ರೋಧನೆಯ ಮಳೆಯಲ್ಲಿ ತೋಯುತ್ತಾ ನರಳುತ್ತದೆ.
ಒಂಟಿ ಜೀವ
ಮುಳ್ಳುಕಂಟಿಯ ಹಾದಿಯಲ್ಲಿ ಭಾರವಾದ ಹೆಜ್ಜೆಯನ್ನಿಡುತ್ತದೆ..
ಒಲಿದ ಜೀವ
ಎದುರಾದರೆ ಮನದ ತಲ್ಲಣವೆಲ್ಲವೂ ಮರೆಯಾಗಿ ಮನಸು ಸಡಗರದ ಉಯ್ಯಾಲೆಯಲ್ಲಿ ಜೀಕುತ್ತದೆ.
ಒಟ್ಟಾರೆ...
"ಪ್ರೀತಿಯ ಹಾದಿಯಲ್ಲಿ ಪ್ರೇಮದ ಹೂವು ಹಿಡಿದು ಕುಳಿತ ಪ್ರೇಮಿಯ ಹೃದಯದ ಪಾವನ ಕನಸುಗಳು ಎಂದಿಗೂ ಅಮರ.. ಎಂದಿಗೂ ಸಂಭ್ರಮದ ಚಿತ್ತಾರ..."
ಇವೆಲ್ಲವುಗಳು
ಸಂಗಮದ ಬಿಂಬವೇ ಒಂದು ಮಧುರವಾದ ಚಿತ್ರ. ಅದುವೇ "ಕನಸಿನ ಮಳೆಯಾದಳು.."
ದಯವಿಟ್ಟು
ಈ ಚಿತ್ರವನ್ನು ಎಲ್ಲರೂ ಬೆಂಬಲಿಸಿ ಸಹಕರಿಸಿ..
ಈ ಚಿತ್ರದ ಟ್ರೈಲರ್ ಯೂಟ್ಯೂಬ್ ನಲ್ಲಿ ಈ ಕೆಳಗಿನ ಲಿಂಕ್ https://www.youtube.com/watch?v=VU43UgmGiUM ನಲ್ಲಿ ಬಿಡುಗಡೆಯಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ..
ತಾವು ಪ್ರತಿಕ್ರಿಯಿಸಿ
ಹಾಗೂ ಲಿಂಕ್ ನ್ನು ನಿಮ್ಮ ಸ್ನೇಹಿತರಿಗೂ ತಲುಪಿಸಿ ಹಾಗೂ ಚಿತ್ರವು ಇದೇ ತಿಂಗಳು ಒ.ಟಿ.ಟಿ. ಪ್ಲಾಟ್
ಫಾರಂನಲ್ಲಿ ಬಿಡುಗಡೆಯಾಗಲಿದ್ದು ಎಲ್ಲರೂ ನೋಡಿ ಹಾರೈಸಿ..
#ಕನಸಿನ_ಮಳೆಯಾದಳು_ಚಿತ್ರತಂಡ