ಬತ್ತದ ಸರೋವರದ ಕಮಲ ನೀನು
ಪ್ರೀತಿ ಸಿಂಚಿಸುವ ಗೆಳತಿ ನೀನು
ಸವಿ ಸಂಭ್ರಮದ ಸಖ್ಯವು ನೀನು
ಬಾಳು ಬೆಳಗುವ ಕಮಲಿ ನೀನು..
ಬಾಳಲಿ ನಿತ್ಯ ಬೆಳಗುವ ದೀವಟಿಗೆಯು
ಒಲವ ಕಾಸಾರದಲಿ ನಲಿವ ಕುಸುಮವು
ಜಗದ ಚೆಲುವ ಆಕಲನವು
ಮನದಾಳದ ಕಮಲಿಯು ನೀನು..
ಮುನಿಸು ರೋಧನ ಕರಗಿಸುವವಳು
ಹಿತರಾಧನೆಯ ಚೆಲ್ಲುವವಳು
ಒಲವ ಕುಸುಮ ತಂದವಳು
ಒಲವಾರಾಧನೆಗೆ ಅರ್ಹಳು ನೀ ಕಮಲೀ..
ಭವ್ಯತೆಯ ಕನಸಿಗೆ ನೂಕಿದವಳು
ನವ್ಯತೆಯ ಭಾವವರಳಿಸಿದವಳು
ಹೃದಯ ಕಮನೀಯಳು
ಕೈಹಿಡಿದು ನಡೆಸುತ ನಿತ್ಯ ನಲಿವವಳು
ನೀನೇ ನನ್ನ ಮನದಾ ಕಮಲೀ..
ಸವಿಗಾನ ನುಡಿಸುವ ಮಲ್ಲಿಯು
ಒಲವ ಸೋಪಾನದ ಒಡತಿಯು
ಮರೆಯಾಗದೆ ಮನದಲ್ಲಿ ಅಚ್ಚಾದವಳು
ಹೂಮೊಗದ ಸಿರಿಯು
ನೀನೇ....ಕಮಲೀ...
ರಾಮಚಂದ್ರ ಸಾಗರ್
ಪ್ರೀತಿ ಸಿಂಚಿಸುವ ಗೆಳತಿ ನೀನು
ಸವಿ ಸಂಭ್ರಮದ ಸಖ್ಯವು ನೀನು
ಬಾಳು ಬೆಳಗುವ ಕಮಲಿ ನೀನು..
ಬಾಳಲಿ ನಿತ್ಯ ಬೆಳಗುವ ದೀವಟಿಗೆಯು
ಒಲವ ಕಾಸಾರದಲಿ ನಲಿವ ಕುಸುಮವು
ಜಗದ ಚೆಲುವ ಆಕಲನವು
ಮನದಾಳದ ಕಮಲಿಯು ನೀನು..
ಮುನಿಸು ರೋಧನ ಕರಗಿಸುವವಳು
ಹಿತರಾಧನೆಯ ಚೆಲ್ಲುವವಳು
ಒಲವ ಕುಸುಮ ತಂದವಳು
ಒಲವಾರಾಧನೆಗೆ ಅರ್ಹಳು ನೀ ಕಮಲೀ..
ಭವ್ಯತೆಯ ಕನಸಿಗೆ ನೂಕಿದವಳು
ನವ್ಯತೆಯ ಭಾವವರಳಿಸಿದವಳು
ಹೃದಯ ಕಮನೀಯಳು
ಕೈಹಿಡಿದು ನಡೆಸುತ ನಿತ್ಯ ನಲಿವವಳು
ನೀನೇ ನನ್ನ ಮನದಾ ಕಮಲೀ..
ಸವಿಗಾನ ನುಡಿಸುವ ಮಲ್ಲಿಯು
ಒಲವ ಸೋಪಾನದ ಒಡತಿಯು
ಮರೆಯಾಗದೆ ಮನದಲ್ಲಿ ಅಚ್ಚಾದವಳು
ಹೂಮೊಗದ ಸಿರಿಯು
ನೀನೇ....ಕಮಲೀ...
ರಾಮಚಂದ್ರ ಸಾಗರ್